Sensex-Nifty Friday 24-06-2022 : IndusInd Bank top gainer | ಇಂಡಸ್‌ಇಂಡ್ ಬ್ಯಾಂಕ್ ಟಾಪ್ ಗೇನರ್ - Mechonline

0

 


ಶುಕ್ರವಾರ ಷೇರು ಮಾರುಕಟ್ಟೆ ಹಸಿರು ಬಣ್ಣಕ್ಕೆ ತಿರುಗಿದೆ. ಸತತ ಎರಡನೇ ಸೆಷನ್‌ನಲ್ಲಿ ಷೇರು ಮಾರುಕಟ್ಟೆಯಲ್ಲಿ ಲಾಭ ವಿಸ್ತರಣೆಗೊಂಡಿದೆ. ಏಷ್ಯನ್ ಷೇರುಗಳು ಶುಕ್ರವಾರ ಏರಿಕೆಯಾಗಿದೆ. ವಾಲ್ ಸ್ಟ್ರೀಟ್‌ನಲ್ಲಿ ಕಂಡ ಪಾಸಿಟಿವ್ ಬೆಳವಣಿಗೆ ಹಿನ್ನೆಲೆ ಷೇರು ಮಾರುಕಟ್ಟೆ ಲಾಭ ಕಂಡಿದೆ.

30-ಷೇರು ಬಿಎಸ್‌ಇ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 604 ಪಾಯಿಂಟ್‌ಗಳು ಅಥವಾ ಶೇಕಡಾ 1.16 ರಷ್ಟು ಏರಿಕೆಯಾಗಿ 52,870 ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 175 ಪಾಯಿಂಟ್‌ಗಳು ಅಥವಾ 1.12 ರಷ್ಟು ಏರಿಕೆಯಾಗಿ 15,732 ಕ್ಕೆ ವಹಿವಾಟು ಆರಂಭ ಮಾಡಿದೆ.ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡಾ 0.93 ರಷ್ಟು ಮತ್ತು ಸ್ಮಾಲ್ ಕ್ಯಾಪ್ ಶೇಕಡಾ 1.26 ರಷ್ಟು ಏರಿಕೆಯಾಗಿದೆ. ನಿಫ್ಟಿ ಬ್ಯಾಂಕ್ ಮತ್ತು ನಿಫ್ಟಿ ಎಫ್‌ಎಂಸಿಜಿ ಕ್ರಮವಾಗಿ ಶೇಕಡಾ 1.55 ಮತ್ತು 1.17 ರಷ್ಟು ಏರಿಕೆಯಾಗಿದೆ.

ಇಂಡಸ್‌ಇಂಡ್ ಬ್ಯಾಂಕ್ ಟಾಪ್ ಗೇನರ್

ಇಂಡಸ್‌ಇಂಡ್ ಬ್ಯಾಂಕ್ ಟಾಪ್ ನಿಫ್ಟಿ ಗೇನರ್ ಆಗಿದ್ದು, ಷೇರುಗಳು ಶೇಕಡಾ 3.10 ರಷ್ಟು ಏರಿಕೆಯಾಗಿ ರೂಪಾಯಿ 809.25 ಕ್ಕೆ ತಲುಪಿದೆ. ಹಿಂದೂಸ್ತಾನ್ ಯೂನಿಲಿವರ್, ಟಾಟಾ ಗ್ರಾಹಕ ಉತ್ಪನ್ನಗಳು, ಭಾರ್ತಿ ಏರ್‌ಟೆಲ್ ಮತ್ತು ಐಸಿಐಸಿಐ ಬ್ಯಾಂಕ್ ಕೂಡ ಲಾಭ ಗಳಿಸಿದೆ.ಬಿಎಸ್‌ಇಯಲ್ಲಿ 1,794 ಷೇರುಗಳು ಲಾಭವನ್ನು ಕಂಡಿದ್ದರೆ, 361 ಷೇರುಗಳು ಕುಸಿತ ಕಂಡಿದೆ. 30-ಷೇರುಗಳ ಇಂಡಸ್‌ಇಂಡ್ ಬ್ಯಾಂಕ್, ಎಚ್‌ಯುಎಲ್, ಏರ್‌ಟೆಲ್, ಐಸಿಐಸಿಐ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಅಲ್ಟ್ರಾಟೆಕ್ ಸಿಮೆಂಟ್, ಟಾಟಾ ಸ್ಟೀಲ್, ಎಸ್‌ಬಿಐ, ಕೋಟಕ್ ಮಹೀಂದ್ರಾ ಬ್ಯಾಂಕ್, ಡಾ ರೆಡ್ಡೀಸ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಬಜಾಜ್ ಫೈನಾನ್ಸ್ ಟಾಪ್ ಗೇನರ್ ಆಗಿದೆ.

ದೇಶದ ಅತಿದೊಡ್ಡ ವಿಮಾ ಸಂಸ್ಥೆ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರುಗಳು ಶೇ 0.56 ರಷ್ಟು ಏರಿಕೆಯಾಗಿ ರೂಪಾಯಿ 668.60 ಕ್ಕೆ ವಹಿವಾಟು ನಡೆಸಿವೆ. ಈ ನಡುವೆ ಟೆಕ್ ಮಹೀಂದ್ರಾ ಮತ್ತು ಏಷ್ಯನ್ ಪೇಂಟ್ಸ್ ನಷ್ಟವನ್ನು ಕಂಡಿದೆ. ಗುರುವಾರದಂದು ಸೆನ್ಸೆಕ್ಸ್ 443 ಪಾಯಿಂಟ್ ಅಥವಾ ಶೇಕಡಾ 0.86 ರಷ್ಟು ಜಿಗಿದು 52,266 ಕ್ಕೆ ತಲುಪಿದ್ದರೆ, ನಿಫ್ಟಿ 143 ಪಾಯಿಂಟ್ ಅಥವಾ 0.93 ರಷ್ಟು ಏರಿಕೆ ಕಂಡು 15,557 ಕ್ಕೆ ಸ್ಥಿರವಾಯಿತು.

The stock market turned green on Friday. Stock market profits expanded for the second consecutive session. Asian stocks rose Friday. The stock market has gained momentum on the back of positive growth in Wall Street. The 30-share BSE Sensex rose 604 points, or 1.16 per cent, to 52,870 in early trade. The NSE Nifty gained 175 points, or 1.12 per cent, to 15,732.

Nifty Midcap rose 100 percent to 0.93 percent and SmallCap to 1.26 percent. Nifty Bank and Nifty FMCG rose 1.55 per cent and 1.17 per cent, respectively.

IndusInd Bank Top Gainer

IndusInd Bank is the top Nifty gainer, with shares climbing 3.10 per cent to Rs 809.25. Hindustan Unilever, Tata Consumer Products, Bharti Airtel and ICICI Bank also benefited. The market breadth was negative - 1,794 shares traded while 361 stocks declined. Top 30 giants are IndusInd Bank, HUL, Airtel, ICICI Bank, Reliance Industries, Ultratech Cement, Tata Steel, SBI, Kotak Mahindra Bank, Dr Reddy's, HDFC Bank and Bajaj Finance.

Shares of the country's largest insurance company, Indian Life Insurance Corporation (LIC), rose 0.56 per cent to Rs 668.60. Meanwhile, Tech Mahindra and Asian Paints have seen losses. The Sensex jumped 443 points, or 0.86 per cent, to 52,266 on Thursday, while the Nifty gained 143 points, or 0.93 per cent, to 15,557.

Post a Comment

0 Comments
Post a Comment (0)
To Top